"ಕಾವೇರಿಯು ಸ್ವಾಸ್ಥ್ಯ ಸಮೃದ್ಧಿಗಳ ಮೂಲವಷ್ಟೇ ಅಲ್ಲದೆ, ಈ ನಾಡಿನ ಜೀವದಾತೆಯೇ ಆಗಿದ್ದಾಳೆ. 50 ವರ್ಷಗಳಲ್ಲಿ ಈ ಪ್ರದೇಶದ 87% ಹಸಿರು ಹೊದಿಕೆ ಕಣ್ಮರೆಯಾಗಿದೆ, ಮತ್ತು ವರ್ಷಪೂರ್ತಿ ತುಂಬಿ ಹರಿಯುತ್ತಿದ್ದ ಈ ಅರಣ್ಯಪೋಷಿತ ನದಿಯು ಈಗ ವೇಗವಾಗಿ ಕೆಲವು ತಿಂಗಳುಗಳಷ್ಟೇ ಹರಿಯುವ ತೊರೆಯಾಗುತ್ತಿದ್ದಾಳೆ. ಕಾವೇರಿ ಕೂಗುತ್ತಿದ್ದಾಳೆ, ಕೇಳಿಸಿಕೊಳ್ಳುವ ಹೃದಯವು ನಿಮಗಿದೆಯೇ?" - ಸದ್ಗುರು
ಕಾವೇರಿ ಕೂಗು ಒಂದು ವಿಶಿಷ್ಟವಾದ ಅಭೂತಪೂರ್ವ ಅಭಿಯಾನ. ಇದು ಭಾರತದ ಜೀವನಾಡಿಗಳಾದ ನದಿಗಳನ್ನು ಪುನಶ್ಚೇತನಗೊಳಿಸುವುದು ಹೇಗೆ ಎಂಬ ಬಗ್ಗೆ ಮಾದರಿ ರೂಪುರೇಷೆಯನ್ನು ಒದಗಿಸುತ್ತದೆ.