ಕಾವೇರಿ ಕೂಗು ಅಭಿಯಾನವು ಅರಣ್ಯಕೃಷಿಯ ಮೂಲಕ ಕಾವೇರಿ ಜಲಾನಯನ ಪ್ರದೇಶದಲ್ಲಿ 242 ಕೋಟಿ ಮರಗಳನ್ನು ನೆಡಲು ರೈತರಿಗೆ ಬೆಂಬಲ ನೀಡುತ್ತದೆ.
ಮಣ್ಣು: ಮಣ್ಣಿನ ಪೋಷಕಾಂಶಗಳು ಮತ್ತು ಇಂಗಾಲದ ಅಂಶವನ್ನು ಮರುಪೂರೈಸುವುದು. ಹಸಿರು ಹೊದಿಕೆಯ ಹೆಚ್ಚಳವು ನೆಲವನ್ನು ನೆರಳಿನಡಿಯಲ್ಲಿ ತರುತ್ತದೆ. ಮಣ್ಣಿನ ಗುಣಮಟ್ಟವನ್ನು ಪರಿವರ್ತಿಸುವಲ್ಲಿ, ನೀರನ್ನು ಹೀರಿಕೊಳ್ಳಲು, ಅದನ್ನು ಮತ್ತೆ ಫಲವತ್ತಾಗಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ನದಿಯ ಸುತ್ತಲಿನ ಪರಿಸರವನ್ನು ಪುನರುಜ್ಜೀವನಗೊಳಿಸುತ್ತದೆಯಲ್ಲದೆ ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುತ್ತದೆ.
ನದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಮಾರು 40% ವೃದ್ಧಿಸುವುದು. ನೆಲವು ನೆರಳಿನಲ್ಲಿರುವಾಗ, ಮಣ್ಣಿನಲ್ಲಿರುವ ಸಾವಯವ ಪದಾರ್ಥಗಳು ಹೆಚ್ಚಾಗುತ್ತವೆ. ಮಣ್ಣು ನೀರನ್ನು ಉಳಿಸಿಕೊಳ್ಳುತ್ತದೆ ಮತ್ತು ನೆಲದಡಿಯಲ್ಲಿ ನಿಧಾನವಾಗಿ ಕೆಳಕ್ಕಿಳಿಯಲು ಅನುವು ಮಾಡಿಕೊಡುತ್ತದೆ, ಹೀಗಾದಾಗ ಈ ಮಣ್ಣು ವರ್ಷಪೂರ್ತಿ ನದಿಗೆ ನೀರನ್ನು ಒದಗಿಸುತ್ತದೆ.
ರೈತ: ಅರಣ್ಯಕೃಷಿಯು ರೈತರ ಆದಾಯವನ್ನು 5-7 ವರ್ಷಗಳಲ್ಲಿ 3-8 ಪಟ್ಟು ಹೆಚ್ಚಿಸುತ್ತದೆ. ಮರಗಳು ಕೀಟಗಳನ್ನು ಕಡಿಮೆ ಮಾಡುತ್ತದೆಯಾದ್ದರಿಂದ ಫಸಲು ಉತ್ತಮವಾಗಿ ಆದಾಯವು ಹೆಚ್ಚುತ್ತದೆ.
ಈಶ ಮತ್ತು ಪರಿಸರ ಸಂರಕ್ಷಣೆt
ರ‍್ಯಾಲೀ ಫಾರ್ ರಿವರ್ಸ್ - 16.2 ಕೋಟಿಗೂ ಹೆಚ್ಚು ಜನರಿಂದ ಬೆಂಬಲಿತವಾದ ರ‍್ಯಾಲೀ ಫಾರ್ ರಿವರ್ಸ್ = ಇಂದು ವಿಶ್ವದ ಅತಿದೊಡ್ಡ ಪರಿಸರ ಆಂದೋಲನವಾಗಿದೆ. ರ‍್ಯಾಲೀ ಫಾರ್ ರಿವರ್ಸ್ ಭಾರತದ ನದಿಗಳನ್ನು ಉಳಿಸಲು ಸಮಗ್ರ ಪರಿಹಾರವನ್ನು ಒದಗಿಸುತ್ತದೆ. ಗಮನಾರ್ಹ ಪರಿಸರ ಪ್ರಭಾವದೊಂದಿಗೆ, ಇದು ಆರ್ಥಿಕ ಕಾರ್ಯಕ್ರಮವಾಗಿ ಅದರ ರಚನೆಯಲ್ಲಿ ವಿಶಿಷ್ಟವಾಗಿದೆ.
ಪ್ರಾಜೆಕ್ಟ್ ಗ್ರೀನ್‌ಹ್ಯಾಂಡ್ಸ್ - ಹಸಿರು ಕೈಗಳ ಯೋಜನೆ (ಪಿಜಿಹೆಚ್) ಹಸಿರು ಹೊದಿಕೆಯನ್ನು ಹೆಚ್ಚಿಸಲು, ಮಣ್ಣಿನ ಫಲವತ್ತತೆಯನ್ನು ಪುನಃಸ್ಥಾಪಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸೂಕ್ತವಾಗಿ ನಿರ್ವಹಿಸಲು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ಭಾರತದ ಅತ್ಯುನ್ನತ ಪರಿಸರ ಪ್ರಶಸ್ತಿಯನ್ನು ಪಡೆದುಕೊಂಡ ಒಂದು ತಳಮಟ್ಟದ ಪರಿಸರ ಉಪಕ್ರಮವಾಗಿದೆ. ಪಿಜಿಹೆಚ್ ತಮಿಳುನಾಡಿನಾದ್ಯಂತ 3.5 ಕೋಟಿ ಮರಗಳನ್ನು ನೆಡುವಿಕೆಯನ್ನು ಸಾಧ್ಯವಾಗಿಸಿದೆ.
ನಡೆಯುತ್ತಿರುವ ಕಾರ್ಯಗಳು
15 ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ರಾಷ್ಟ್ರದಾದ್ಯಂತ ನದಿಗಳ ಪುನರುಜ್ಜೀವನಕ್ಕೆ ಬೆಂಬಲ ನೀಡಲು ಯೋಜಿಸಲಾಗುತ್ತಿದೆ.
ಸೆಪ್ಟೆಂಬರ್ 2019
ಸೆಪ್ಟೆಂಬರ್-ನಲ್ಲಿ ಸದ್ಗುರುಗಳು ಎರಡು ವಾರಗಳ ಬೈಕ್ ರ‍್ಯಾಲೀಯನ್ನು ನಡೆಸಲಿದ್ದಾರೆ. ಸದ್ಗುರುಗಳು ತಲಕಾವೇರಿಯಲ್ಲಿರುವ ಕಾವೇರಿಯ ಮೂಲದಿಂದ ತಿರುವರೂರಿಗೆ ಬೈಕಿನಲ್ಲಿ ಪ್ರಯಾಣ ಮಾಡಿ, ಪ್ರಮುಖ ನಗರಗಳಲ್ಲಿ ಹಲವಾರು ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇದರ ಜೊತೆಗೆ ಕಾವೇರಿಯುದ್ದಕ್ಕೂ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ನೂರಾರು ಸಣ್ಣ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.
ಜುಲೈ 2019
ಕಾವೇರಿ ನದಿಯನ್ನು ಪುನರುಜ್ಜೀವನಗೊಳಿಸಲು ಮತ್ತು ರೈತರಿಗೆ ಸಹಾಯ ಮಾಡಲು 242 ಕೋಟಿ ಮರಗಳನ್ನು ನೆಡಲು ಕಾವೇರಿ ಕೂಗು ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಲಾಯಿತು.
ಮಾರ್ಚ್ 2019
ರ‍್ಯಾಲೀ ಫಾರ್ ರಿವರ್ಸ್ ಜೊತೆಯಲ್ಲಿ ವಾಘರಿ ನದಿ ಪುನರುಜ್ಜೀವನಗೊಳಿಸುವ ಯೋಜನೆಗೆ ಮಹಾರಾಷ್ಟ್ರ ರಾಜ್ಯ ಅನುಮೋದನೆ ನೀಡಿ 54 ಕಿ.ಮೀ ನದಿಯನ್ನು ಮತ್ತು 285 ಚದರ ಕಿ.ಮೀ ನದಿ ಜಲಾನಯನ ಪ್ರದೇಶವನ್ನು ಪುನರುಜ್ಜೀವನಗೊಳಿಸಲು 415 ಕೋಟಿಯನ್ನು ಬಿಡುಗಡೆ ಮಾಡಿದೆ. ಕ್ಷೇತ್ರಕಾರ್ಯದಲ್ಲಿ ನದಿ ವೀರರು ಗ್ರಾಮಸ್ಥರನ್ನು ಭೇಟಿ ಮಾಡಿ ಮಣ್ಣು ಮತ್ತು ನೀರಿನ ಸಮೀಕ್ಷೆ ನಡೆಸುತ್ತಿದ್ದಾರೆ.
ಫೆಬ್ರವರಿ 2019
ಅತ್ಯುತ್ತಮ ಶೈಕ್ಷಣಿಕ / ಸಾಮೂಹಿಕ ಜಾಗೃತಿ ಪ್ರಯತ್ನಕ್ಕಾಗಿ ರ‍್ಯಾಲೀ ಫಾರ್ ರಿವರ್ಸ್-ಗೆ ಭಾರತ ಸರ್ಕಾರವು ರಾಷ್ಟ್ರೀಯ ಜಲ ಪ್ರಶಸ್ತಿಯನ್ನು ನೀಡಿದೆ.
ಆಗಸ್ಟ್ 2018
ವಾಘಾರಿ ನದಿ ಯೋಜನೆಗೆ ಮಹಾರಾಷ್ಟ್ರ ಸರ್ಕಾರ ಡಿಪಿಆರ್‌ಗೆ ತಾತ್ವಿಕವಾಗಿ ಅನುಮೋದನೆ ನೀಡುತ್ತದೆ.
ಜುಲೈ 2018
ಮಹಾರಾಷ್ಟ್ರದ ಯವತ್ಮಾಳದಲ್ಲಿ ವಾಘಾರಿ ನದಿ ಪುನರುಜ್ಜೀವನ ಯೋಜನೆಗಾಗಿ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಅಧಿಕೃತವಾಗಿ ಸಲ್ಲಿಸಲಾಗಿದೆ.
ಜೂನ್ 2018
ನೀತಿ ಆಯೋಗವು ರಾಷ್ಟ್ರವ್ಯಾಪಿ ನೀತಿ ಘೋಷಿಸಿ, ಭಾರತದ ಎಲ್ಲಾ 29 ರಾಜ್ಯಗಳಿಗೆ ನದಿ ಪುನರುಜ್ಜೀವನಕ್ಕಾಗಿ ಸಲಹೆಗಳನ್ನು ಒದಗಿಸುತ್ತದೆ ಮತ್ತು ತ್ವರಿತ ಅನುಷ್ಠಾನಕ್ಕೆ ಶಿಫಾರಸು ಮಾಡುತ್ತದೆ.
ಏಪ್ರಿಲ್ 2018
ನದಿ ವೀರರು ರಾಷ್ಟ್ರಮಟ್ಟದ ತಜ್ಞರು ಮತ್ತು ಸಂಪನ್ಮೂಲ ಮುಖಂಡರಿಂದ ವಿವಿಧ ಸಂಬಂಧಿತ ಅಂಶಗಳಲ್ಲಿ ತೀವ್ರ ತರಬೇತಿ ಪಡೆಯುತ್ತಾರೆ.
ಮಾರ್ಚ್ 2018
ವಿಶ್ವಸಂಸ್ಥೆಯು ಸದ್ಗುರುಗಳನ್ನು “ನೀರಿನ ದಶಕಗಳ ಕ್ರಿಯೆಯ” ಆರಂಭಕ್ಕೆ ಆಹ್ವಾನಿಸಿದೆ.
ಫೆಬ್ರವರಿ 2018
ಭಾರತೀಯ ನದಿಗಳನ್ನು ಪುನರುಜ್ಜೀವನಗೊಳಿಸಲು ನೀತಿ ಆಯೋಗವು "ಪ್ರೋಗ್ರಾಂ ಫಾರ್ ಆಕ್ಷನ್" ಅನ್ನು ರೂಪಿಸುತ್ತದೆ, ಇದನ್ನು ಪ್ರಧಾನಮಂತ್ರಿಗಳು ಕಾರ್ಯಾಲಕ್ಕೆ (ಪಿಎಂಒ) ಸಲ್ಲಿಸಲಾಗುತ್ತದೆ.
ಡಿಸೆಂಬರ್ 2017
- ನದಿ ಪುನರುಜ್ಜೀವನಕ್ಕಾಗಿ 6 ರಾಜ್ಯಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಆಂದೋಲನಕ್ಕಾಗಿ ತಮ್ಮ ಮೂರು ವರ್ಷಗಳನ್ನು ಸಮರ್ಪಿಸಿರುವ 100 ಕ್ಕೂ ಹೆಚ್ಚು ನದಿ ವೀರರು ತಂಡವನ್ನು ಸೇರುತ್ತಾರೆ.
- ರ‍್ಯಾಲೀ ಫಾರ್ ರಿವರ್ಸ್ ಆಂದೋಲನದ ಅದ್ಭುತ ಯಶಸ್ಸನ್ನು ವಿಶ್ವಸಂಸ್ಥೆ ಪರಿಸರದ ಮುಖ್ಯಸ್ಥರಾದ ಎರಿಕ್ ಸೊಲ್ಹೈಮ್ ಅವರೊಂದಿಗೆ ಹಂಚಿಕೊಳ್ಳಲು ಸದ್ಗುರುಗಳನ್ನು ಜರ್ಮನಿಯ ಬಾನ್‌ನಲ್ಲಿರುವ ಗ್ಲೋಬಲ್ ಲ್ಯಾಂಡ್‌ಸ್ಕೇಪ್ಸ್ ಫೋರಂಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ.
ನವೆಂಬರ್ 2017
ನೀತಿ ಆಯೋಗದ ಸಿಇಒ ಅಡಿಯಲ್ಲಿ ತಜ್ಞರ ಗುಂಪಿಗೆ ಪ್ರಧಾನ ಮಂತ್ರಿ ಅಧಿಸೂಚನೆ ಹೊರಡಿಸುತ್ತಾರೆ. ಪ್ರಮುಖ ತಜ್ಞರೊಂದಿಗೆ ರ‍್ಯಾಲೀ ಫಾರ್ ರಿವರ್ಸ್ ಮಂಡಳಿಗೆ ರಚಿಸಲಾಗುತ್ತದೆ ಮತ್ತು ಅದು ತನ್ನ ಮೊದಲ ರಾಷ್ಟ್ರೀಯ ಸಭೆಯನ್ನು ನಡೆಸುತ್ತದೆ.
ಅಕ್ಟೋಬರ್ 2017
ರ‍್ಯಾಲೀ ಫಾರ್ ರಿವರ್ಸ್ ಅಭಿಯಾನವು ನವದೆಹಲಿಯಲ್ಲಿ ಮುಕ್ತಾಯವಾಯಿತು. ಸದ್ಗುರುಗಳು ನದಿ ಪುನರುಜ್ಜೀವನ ಕರಡು ನೀತಿ ಶಿಫಾರಸನ್ನು ಪ್ರಧಾನಿಗೆ ಹಸ್ತಾಂತರಿಸಿದರು.
ಸೆಪ್ಟೆಂಬರ್ 2017
ಸದ್ಗುರುಗಳು ಭಾರತದಾದ್ಯಂತ ರ‍್ಯಾಲೀ ಫಾರ್ ರಿವರ್ಸ್ ಆಂದೋಲನವನ್ನು ಆರಂಭಿಸುತ್ತಾರೆ. ಇದು 16.2 ಕೋಟಿ ಜನರ ಮತ್ತು 16 ರಾಜ್ಯಗಳಲ್ಲಿನ ಹಲವು ರಾಜಕೀಯ ಪಕ್ಷಗಳ ಸಂಘಟಿತ ಸಂಕಲ್ಪದ ಬೆಂಬಲ ಪಡೆದುಕೊಂಡ ಆಂದೋಲನವಾಯಿತು.