ರೈತರು ನೋಂದಾಯಿಸಿಕೊಳ್ಳುವ ಲಿಂಕ್
ಅರಣ್ಯ ಕೃಷಿ ಮಾದರಿಗಳು ಭಾರತದಾದ್ಯಂತ ರೈತರ ಆದಾಯದಲ್ಲಿ ಹೆಚ್ಚಳವನ್ನು ತೋರಿಸಿವೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಅರಣ್ಯಕೃಷಿಗೆ ಬದಲಿಸಲು ಪ್ರೋತ್ಸಾಹಧನವನ್ನು ನೀಡಲು ಸರ್ಕಾರ ತಾತ್ವಿಕವಾಗಿ ಒಪ್ಪಿಕೊಂಡಿದೆ.
ಹಣ್ಣಿನ ಅಥವಾ ದಿಮ್ಮಿ ಮರಗಳನ್ನು ಬೆಳೆಯುವುದನ್ನು ಪೂರ್ಣ ಪ್ರಮಾಣದ ವ್ಯವಸಾಯವಾಗಿ ಅಳವಡಿಸಿಕೊಳ್ಳುವ ಅಥವಾ ಅವನ್ನು ಇತರ ಕೃಷಿ ಬೆಳೆಗಳ ಜೊತೆಯಲ್ಲಿ ಬೆಳೆಯಲಾಗುವ ಒಂದು ಕೃಷಿವಿಧಾನವನ್ನು ಅರಣ್ಯಕೃಷಿಯೆಂದು ಕರೆಯಲಾಗುತ್ತದೆ.
ಈಶ 69,760 ರೈತರನ್ನು ಅರಣ್ಯಕೃಷಿಗೆ ಬದಲಾಯಿಸಿದ್ದು, 5-7 ವರ್ಷಗಳಲ್ಲಿ ರೈತರ ಆದಾಯಲ್ಲಿ 300-800% ಹೆಚ್ಚಳವಾಗಿದೆ.
ಅರಣ್ಯಕೃಷಿ ಪ್ರಯೋಜನಗಳು:
ಅರಣ್ಯಕೃಷಿಯು ಹೊಲದ ಬೆಳೆಗಳಿಗೆ ಆಸರೆಯಾಗುತ್ತದೆ
- ಮರದ ಎಲೆಗಳ ಹಸಿರು ತ್ಯಾಜ್ಯವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ
- ಮರಗಳು ಕೀಟಗಳ ಹಾವಳಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಋತುಕಾಲಿಕ ರೋಗಗಳಿಂದ ಪ್ರಭಾವಿತವಾಗುವುದಿಲ್ಲ
ಕೃಷಿ ಅರಣ್ಯವು ರೈತರಿಗೆ ಆದಾಯವನ್ನು ಖಚಿತಪಡಿಸುತ್ತದೆ
- ಮರಗಳನ್ನು ಬೆಳೆಸಲು ಕಡಿಮೆ ಖರ್ಚು ಮತ್ತು ಕಡಿಮೆ ಶ್ರಮ ಬೇಕಾಗುತ್ತದೆ
- ಮರಮಟ್ಟುಗಳು ಆಪತ್ಕಾಲದಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ
- ವಾಣಿಜ್ಯ ಬೆಳೆಗಳನ್ನು ಅಂತರ್ಬೆಳೆಯಾಗಿ ಬೆಳೆಯುವುದರಿಂದ ನಿರಂತರ ಆದಾಯ ಸಿಗುತ್ತದೆ
ಅರಣ್ಯಕೃಷಿಯು ಬರಗಾಲ ಮತ್ತು ಪ್ರವಾಹಗಳನ್ನು ತಪ್ಪಿಸಬಲ್ಲದು
- ಅರಣ್ಯಕೃಷಿಯಲ್ಲಿ ನೀರಿನ ಬಳಕೆ ಕಡಿಮೆಯಿರುತ್ತದೆ
- ಮರಗಳು ಅಂತರ್ಜಲದ ಮಟ್ಟವನ್ನು ಹೆಚ್ಚಿಸಿ ನದಿಯ ಹರಿವನ್ನು ಸ್ಥಿರಗೊಳಿಸುತ್ತದೆ
ನಿಮಗೆ ಅರಣ್ಯಕೃಷಿಯಲ್ಲಿ ಆಸಕ್ತಿ ಇದ್ದರೆ, ಈ ಫಾರ್ಮ್-ಅನ್ನು ಭರ್ತಿ ಮಾಡಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.