ಮಣ್ಣಿನ ಮ್ಯಾಜಿಕ್
“ಸಾವನ್ನು ಜೀವನವನ್ನಾಗಿ ಮಾಡುವ ಏಕೈಕ ಮ್ಯಾಜಿಕ್ ವಸ್ತು”
– ಸದ್ಗುರು
ಮಣ್ಣಿನ ಮ್ಯಾಜಿಕ್ ನ್ನು ಜೀವಂತವಾಗಿಡಲು ಮಾನವೀಯತೆಯನ್ನು ಒಟ್ಟುಗೂಡಿಸುವುದೇ ಮಣ್ಣು ಉಳಿಸಿ ಅಭಿಯಾನದ ಉದ್ದೇಶವಾಗಿದೆ.
ಮಣ್ಣು ಉಳಿಸಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ
ಆದರೆ...
ನಿಖರವಾಗಿ ಮಣ್ಣು ಎಂದರೇನು ಮತ್ತು ಅದು ಏನು ಮಾಡುತ್ತದೆ?
ಕೆಳಗಿನ ರಸಪ್ರಶ್ನೆಯ ಮೂಲಕ ನಾವು ಅನ್ವೇಷಿಸೋಣ.
ಪ್ರಶ್ನೆ 1 / 6
ಮಣ್ಣು ______ ಆಗಿದೆ
ಮಣ್ಣು ನಮ್ಮ ಜೀವನಕ್ಕೆ ಆಧಾರವಾಗಿದೆ. ಆದರೆ...
ಕೃಷಿ, ಅರಣ್ಯನಾಶ ಮತ್ತು ಇತರ ಅಂಶಗಳು ಅಪಾಯಕಾರಿ ದರದಲ್ಲಿ ಮೇಲ್ಮಣ್ಣನ್ನು ನಾಶಗೊಳಿಸಿವೆ ಮತ್ತು ಸವೆದು ಹೋಗಿವೆ. ಜಾಗತಿಕವಾಗಿ, 52% ಕೃಷಿ ಭೂಮಿ ಈಗಾಗಲೇ ನಾಶವಾಗಿದೆ. ಭೂಮಿಯು ಬಿಕ್ಕಟ್ಟಿನಲ್ಲಿದೆ. ಮಣ್ಣಿನ ಅವನತಿಯ ದರ ಹೀಗೆ ಮುಂದುವರಿದರೆ, ನಮಗೆ ತಿಳಿದಿರುವಂತೆ ಅದು ಜೀವನದ ಅಂತ್ಯವಾಗಿರುತ್ತದೆ.
ಬಹಳ ಅವನತಿಗೊಂಡಿದೆ
ಅವನತಿಗೊಂಡಿದೆ
ಸ್ಥಿರವಾಗಿದೆ
ಸಸ್ಯವರ್ಗವಿಲ್ಲ
ನಮ್ಮ ಭೂಮಿಯು ಬಿಕ್ಕಟ್ಟಿನಲ್ಲಿದೆ
ಆಹಾರದ ಬಿಕ್ಕಟ್ಟು
ಇನ್ನು 20 ವರ್ಷಗಳಲ್ಲಿ, 9.3 ಶತಕೋಟಿ ಜನರಿಗೆ ಆಹಾರ ಉತ್ಪಾದನೆಯು 40% ಕಡಿಮೆ ಆಗುವ ನಿರೀಕ್ಷೆಯಿದೆ.
ಫಲವತ್ತತೆ ಕಳೆದುಕೊಂಡ ಮಣ್ಣು ಕಡಿಮೆ ಪೌಷ್ಟಿಕಾಂಶಕ್ಕೆ ಕಾರಣವಾಗುತ್ತದೆ. ಇಂದಿನ ಹಣ್ಣುಗಳು ಮತ್ತು ತರಕಾರಿಗಳು ಈಗಾಗಲೇ 90% ಕಡಿಮೆ ಪೋಷಕಾಂಶಗಳನ್ನು ಹೊಂದಿವೆ.
2 ಶತಕೋಟಿ ಜನರು ಪೌಷ್ಟಿಕಾಂಶದ ಕೊರತೆಯಿಂದ ಬಳಲಲಿದ್ದು, ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ.
ನೀರಿನ ಕೊರತೆ
ಫಲವತ್ತತೆ ಕಳೆದುಕೊಂಡ ಮಣ್ಣು ನೀರನ್ನು ಹೀರಿಕೊಳ್ಳಲು ಮತ್ತು ನೀರಿನ ಹರಿವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಇಲ್ಲವಾಗುವುದರಿಂದ, ನೀರಿನ ಕೊರತೆ, ಬರ ಮತ್ತು ಪ್ರವಾಹಗಳಿಗೆ ಕಾರಣವಾಗುತ್ತದೆ.
ಸಾವಯವ ಪದಾರ್ಥವು ಅದರ ತೂಕದ 90% ರಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಕಾಲಾನಂತರದಲ್ಲಿ ನಿಧಾನವಾಗಿ ಬಿಡುಗಡೆ ಮಾಡುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಇದು ದೊಡ್ಡ ಸಹಾಯವಾಗುತ್ತದೆ.
ಜೀವವೈವಿಧ್ಯತೆಯ ನಷ್ಟ
ಆವಾಸಸ್ಥಾನದ ನಷ್ಟದಿಂದಾಗಿ ಪ್ರತಿ ವರ್ಷ ಸುಮಾರು 27,000 ಜಾತಿಯ ಜೀವ ರೂಪಗಳು ನಾಶವಾಗುತ್ತಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಈ ಬಿಕ್ಕಟ್ಟಿನಿಂದಾಗಿ ಕೀಟಗಳ ಜೀವರಾಶಿಯ 80% ಈಗಾಗಲೇ ನಷ್ಟವಾಗಿದೆ.
ಜೀವವೈವಿಧ್ಯತೆಯ ನಷ್ಟವು ಮಣ್ಣನ್ನು ಮತ್ತಷ್ಟು ನಾಶ ಮಾಡುತ್ತದೆ ಮತ್ತು ಮಣ್ಣಿನ ಪುನರುತ್ಪಾದನೆಯನ್ನು ತಡೆಯುತ್ತದೆ.
ಹವಾಮಾನ ಬದಲಾವಣೆ
ಮಣ್ಣಿನಲ್ಲಿ ಸಂಗ್ರಹವಾಗಿರುವ ಕಾರ್ಬನ್, ಜೀವಂತ ಸಸ್ಯಗಳಿಗಿಂತ ಮೂರು ಪಟ್ಟು ಮತ್ತು ವಾತಾವರಣಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ, ಅಂದರೆ ಮಣ್ಣು ಇಂಗಾಲದ ಪ್ರತ್ಯೇಕತೆಗೆ ನಿರ್ಣಾಯಕವಾಗಿದೆ.
ನಮ್ಮ ಮಣ್ಣನ್ನು ಪುನರುಜ್ಜೀವನಗೊಳಿಸದಿದ್ದರೆ, ಅದು 850 ಶತಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದರ ಮೂಲಕ ಹವಾಮಾನ ಬದಲಾವಣೆಗೆ ಕಾರಣವಾಗಬಹುದು. ಇದು ಕಳೆದ 30 ವರ್ಷಗಳಲ್ಲಿ ಮಾನವರು ವಿಸರ್ಜಿಸಿದ ಎಲ್ಲಾ ಹೊರಸೂಸುವಿಕೆಗಳಿಗಿಂತ ಹೆಚ್ಚು.
ಜೀವನೋಪಾಯದ ನಷ್ಟ
ಮಣ್ಣು ನಾಶವಾಗುತ್ತಿರುವುದರಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
74% ಬಡವರು ಜಾಗತಿಕವಾಗಿ ಮಣ್ಣಿನ ಅವನತಿಯಿಂದ ನೇರವಾಗಿ ಪ್ರಭಾವಿತರಾಗಿದ್ದಾರೆ.
ಮಣ್ಣಿನ ಅಳಿವಿನಿಂದಾಗಿ ಪ್ರತಿ ವರ್ಷ 10.6 ಟ್ರಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ವೆಚ್ಚ ನಮಗಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಸಂಘರ್ಷ ಮತ್ತು ವಲಸೆ
ಜನಸಂಖ್ಯಾ ಸ್ಫೋಟ ಹಾಗು ಆಹಾರ ಮತ್ತು ನೀರಿನ ಕೊರತೆಯು 2050 ರ ವೇಳೆಗೆ 100 ಕೋಟಿಗೂ ಹೆಚ್ಚು ಜನರು ಇತರ ಪ್ರದೇಶಗಳಿಗೆ ಮತ್ತು ದೇಶಗಳಿಗೆ ವಲಸೆ ಹೋಗುವಂತೆ ಮಾಡಬಹುದು.
1990 ರಿಂದ ಆಫ್ರಿಕಾದಲ್ಲಿ 90% ಕ್ಕಿಂತ ಹೆಚ್ಚು ಪ್ರಮುಖ ಯುದ್ಧಗಳಲ್ಲಿ ಮತ್ತು ಸಂಘರ್ಷಗಳಲ್ಲಿ ಭೂ ಸಮಸ್ಯೆಗಳು ಮಹತ್ವದ ಪಾತ್ರವನ್ನು ವಹಿಸಿವೆ.
ಫ್ರೆಂಚ್ ಕ್ರಾಂತಿಯಿಂದ ಅರಬ್ ವಸಂತದವರೆಗೆ, ಸಾಮೂಹಿಕ ಪ್ರತಿಭಟನೆ ಮತ್ತು ಚಳುವಳಿಗಳು, ಹೆಚ್ಚಿದ ಆಹಾರದ ಬೆಲೆಗಳ ಕಾರಣದಿಂದಾಗಿ ಎಂದು ಉಲ್ಲೇಖಿಸಲಾಗಿದೆ.
ಮಣ್ಣು: ಒಂದು ಸಮಗ್ರ ಪರಿಹಾರ
ಬಹುತೇಕ ಪ್ರತಿಯೊಂದು ಪ್ರಮುಖ ಪರಿಸರ ಬಿಕ್ಕಟ್ಟು, ಸ್ವಲ್ಪ ಮಟ್ಟಿಗೆ ಅಥವಾ ಒಂದು ರೂಪದಲ್ಲಿ, ಮಣ್ಣಿನ ಅವನತಿಯ ಒಂದು ಪರಿಣಾಮ ಅಥವಾ ಲಕ್ಷಣವಾಗಿದೆ. ಅದೇ ರೀತಿ, ಮಣ್ಣನ್ನು ಆರೋಗ್ಯಕರವಾಗಿಸುವುದರ ಮೂಲಕ ಪ್ರತಿಯೊಂದು ಪರಿಸರ ಅಥವಾ ಪರಿಸರ-ಸಂಬಂಧಿತ ಬಿಕ್ಕಟ್ಟನ್ನು ಪರಿಹರಿಸಬಹುದು.
ವಾಸ್ತವವಾಗಿ, ನಾವು ನಮ್ಮ ಪರಿಸರವನ್ನು ಅದರ ಸಂಪೂರ್ಣತೆಯಲ್ಲಿ ಉದ್ದೇಶಿಸದೆಯೇ ಅದರ ಒಂದು ಅಂಶವನ್ನು ಪರಿಹರಿಸಬಹುದು ಎಂದು ಯೋಚಿಸುವುದು ತಪ್ಪು, ಏಕೆಂದರೆ ಪರಿಸರ ವ್ಯವಸ್ಥೆಯ ಯಾವುದೇ ಅಂಶವು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ. ನಾವು ಪ್ರಜ್ಞಾವಂತರಾಗುವವರೆಗೆ ಯಾವುದೇ ಪರಿಹಾರವು ಪೂರ್ಣಗೊಳ್ಳುವುದಿಲ್ಲ. ಜೀವನವು ಒಂದೇ ಸಂಕೀರ್ಣ ವಿದ್ಯಮಾನವಾಗಿದೆ, ಇವೆಲ್ಲವೂ ಏಕರೂಪದಲ್ಲಿ ನಡೆಯುತ್ತಿದೆ. ಅನೇಕ ವಿಧಗಳಲ್ಲಿ, ಮಣ್ಣು ಜೀವನವು ಹೊರಹೊಮ್ಮುವ ಆಧಾರವಾಗಿದೆ. ನಾವು ಮಣ್ಣನ್ನು ಸರಿಪಡಿಸಿದರೆ, ನಮಗೆ ಎಲ್ಲವನ್ನೂ ಸರಿಪಡಿಸುವ ಉತ್ತಮ ಅವಕಾಶವಿದೆ.
ತಜ್ಞರು ಏನು ಹೇಳುತ್ತಿದ್ದಾರೆ?
ವಿಜ್ಞಾನ ಏನು ಹೇಳುತ್ತದೆ?
S.O.S - ಸೇವ್ ಅವರ್ ಸಾಯಿಲ್(ನಮ್ಮ ಮಣ್ಣು ಉಳಿಸಿ)?
ಮಣ್ಣಿನ ನಿರ್ವಹಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ
ಜೀವವೈವಿಧ್ಯ
ಜಾಗತಿಕವಾಗಿ ಪ್ರತಿ ವರ್ಷ ಸುಮಾರು 24 ಶತಕೋಟಿ ಟನ್ ಫಲವತ್ತಾದ ಮಣ್ಣು ಮತ್ತು 27,000 ಜೈವಿಕ ಪ್ರಭೇದಗಳು ನಾಶವಾಗುತ್ತಿವೆ
ವಿಶ್ವಸಂಸ್ಥೆಯ ವರದಿ: ಪ್ರಪಂಚದ ಕೃಷಿ ಭೂಮಿಯನ್ನು ಈಗಾಗಲೇ ’ಕುಸಿಯುವ ಮಟ್ಟಕ್ಕೆ’ ದುರುಪಯೋಗ ಮಾಡಲಾಗಿದೆ.
ಹವಾಮಾನ ಬದಲಾವಣೆ
ಪ್ರಪಂಚದ ಹವಾಮಾನ-ಒತ್ತಡಕ್ಕೆ ಮತ್ತು ಮಾಲಿನ್ಯಕ್ಕೆ ಒಳಗಾದ ಬೆಳೆಗಳು ಮತ್ತು ಕೃಷಿ ವ್ಯವಸ್ಥೆಯು ಆಹಾರಕ್ಕಾಗಿ ಸುಸ್ಥಿರ ಅಭ್ಯಾಸಗಳಿಗೆ ತ್ವರಿತವಾಗಿ ಬದಲಾಗಬೇಕು...
ಓ ಮಣ್ಣೇ
ಅದು ಹೇಗೋ ಏನೋ ಹೂವಿನ ರಂಜಕ ಕಂಪಿಗಿಂತ
ನಿನ್ನ ಮಣ್ಣಿನ ಕಂಪು
ನನಗೆ ಹೆಚ್ಚು ಮುದವೆನಿಸುತ್ತದೆ
ಮಣ್ಣಿನಲ್ಲಿ ಹಿಡಿದಿಡಲ್ಪಟ್ಟಿರುವ
ಜೀವದ ಶಕ್ತಿ ಮತ್ತು ಸಂವೇದನೆ
ಒಂದು ಬೇರೆಯೇ ಥರದ
ತುಡಿತದ ಅಲೆಗಳನ್ನು ಹೊಮ್ಮಿಸುತ್ತದೆ
ತುಡಿತ... ಯಾವುದೋ ವ್ಯಕ್ತಿಯದ್ದಲ್ಲ
ಬದಲಿಗೆ ನನ್ನ ಮಾನವಜಾತಿಯದ್ದು
ಆದರೆ ತನ್ನನ್ನು ಸಲಹುವ ಮತ್ತು
ಕೊನೆಗೆ ತಾನು ವಿಲೀನವಾಗುವ ಎಲ್ಲದರೆಡೆಗೂ
ಅದು ಸಂವೇದನಾಹೀನವಾಗಿಬಿಟ್ಟಿದೆ
ಬರಿಗಾಲಲ್ಲಿ ನಡೆಯುತ್ತಿದ್ದಂತೆ,
ನಾನು ಕುಸಿದುಹೋಗುತ್ತಿದ್ದೇನೆ
ವರ್ಣಿಸಲಸದಳವಾದ ಆಳವಾದ ತುಡಿತದಲ್ಲಿ
ಓ ಮಣ್ಣೇ, ನನ್ನ ಜೀವವೇ
ಸದ್ಗುರುಗಳ ಕವನ
ಬನ್ನಿ, ಇದನ್ನು ಸಾಧ್ಯವಾಗಿಸೋಣ!